ದಕ್ಷಿಣಕನ್ನಡ

ಮಂಗಳೂರು:- ಯುವ ಸಂವಾದ, ಮತದಾನದ ಮಹತ್ವದ ಬಗ್ಗೆ ಯುವಜನರಿಗೆ ಜಾಗೃತಿ, “ಪ್ರಜಾಪ್ರಭುತ್ವದ ಶಕ್ತಿ ಯುವಜನರ ಕೈಯಲ್ಲಿದೆ ಪ್ರತಿಯೊಬ್ಬ ಯುವಕನೂ ತನ್ನ ಮತದ ಹಕ್ಕನ್ನು ಚಲಾಯಿಸಬೇಕು” – ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್.

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ ದಕ್ಷಿಣ ಕನ್ನಡ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ “ವಿಕಸಿತ ಭಾರತ ಯುವ ಸಂವಾದ ನೋ ಯುವರ್ ವೋಟ್” ಕಾರ್ಯಕ್ರಮವು ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಉದ್ಘಾಟಿಸಿ ಮಾತನಾಡಿ “ಪ್ರಜಾಪ್ರಭುತ್ವದ ಶಕ್ತಿ ಯುವಜನರ ಕೈಯಲ್ಲಿದೆ ಪ್ರತಿಯೊಬ್ಬ ಯುವಕನೂ ತನ್ನ ಮತದ ಹಕ್ಕನ್ನು ಚಲಾಯಿಸಬೇಕು, ಮತದಾನ ಎಂದರೆ ಕೇವಲ ಹಕ್ಕಲ್ಲ ಅದು ನಮ್ಮ ಕರ್ತವ್ಯ” ಎಂದು ಅವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರವಲ್ಲ ದೇಶದ ಭವಿಷ್ಯ ನಿರ್ಮಾಣದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ದಕ್ಷಿಣ ಕನ್ನಡದ ಯೂತ್ ಐಕಾನ್ ಅಭಿಜಯ್ ಎನ್.ಎಸ್ ಅವರು ಮಾತನಾಡಿ ಪ್ರಜಾಪ್ರಭುತ್ವ ಎಂದರೆ ಕೇವಲ ಮತ ಹಾಕುವುದಲ್ಲ ಪ್ರಾಮಾಣಿಕತೆಯಿಂದ ಮತ ಹಾಕುವುದು ಒಂದು ಮತ, ಒಂದು ಭವಿಷ್ಯ ಪ್ರತಿಯೊಂದು ಮತವೂ ಪವಿತ್ರವಾದದ್ದು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಮೈ ಭಾರತ್ ಉಪ ನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಅರುಣ್ ಪ್ರಕಾಶ್, ವಿದ್ಯಾ ಕೆ.ಎನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *