
ಪ್ರಸ್ತುತ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ 2026ರ ಅಂಗವಾಗಿ ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಸ್ವಚ್ಛತೆ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಬಂದರು ಆವರಣ ಹಾಗೂ ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಆಕರ್ಷಕ ಫ್ಲ್ಯಾಶ್‌ಮಾಬ್ ಆಯೋಜಿಸಲಾಯಿತು.


NMPA ಸಿಬ್ಬಂದಿಯಿಂದ ಪ್ರಸ್ತುತ ಪಡಿಸಲಾದ ಫ್ಲ್ಯಾಶ್‌ಮಾಬ್‌ನಲ್ಲಿ ಸಂಗೀತ, ನೃತ್ಯ, ಚಲನವಲನ ಹಾಗೂ ಯಕ್ಷಗಾನ ಪ್ರದರ್ಶನದ ಮೂಲಕ ಅಧಿಕಾರಿಗಳು ಸಿಬ್ಬಂದಿ ಪಾಲುದಾರರು ಹಾಗೂ ಸಾರ್ವಜನಿಕರನ್ನು ಆಕರ್ಷಿಸಿ ಬಂದರು ಆವರಣದಾಚೆಗೂ ಸ್ವಚ್ಛತೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಎಂಬ ಸಂದೇಶವನ್ನು ಸಾರಲಾಯಿತು.
ಎರಡು ವಾರಗಳ ಕಾಲ ನಡೆಯುತ್ತಿರುವ ಈ ಅಭಿಯಾನದ ಅಂಗವಾಗಿ NMPA ವತಿಯಿಂದ ಸ್ವಚ್ಛತಾ ಅಭಿಯಾನಗಳು, ಪ್ಲಾಗಿಂಗ್, ಕಡಲತೀರ ಸ್ವಚ್ಛತಾ ಕಾರ್ಯಕ್ರಮ ಏಕಬಳಕೆಯ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಅಭಿಯಾನ ಶಾಲಾ ಮಕ್ಕಳಿಗಾಗಿ ವರ್ಮಿಕಾಂಪೋಸ್ಟ್ ಘಟಕಕ್ಕೆ ಭೇಟಿ ತ್ಯಾಜ್ಯದಿಂದ ಕಲಾಕೃತಿ ತಯಾರಿಸುವ ಕಾರ್ಯಾಗಾರಗಳು “ವೆಲ್ತ್ ಔಟ್ ಆಫ್ ವೇಸ್ಟ್” ಚಟುವಟಿಕೆಗಳು ಸ್ವಚ್ಛತಾ ರಥ ರ‍್ಯಾಲಿ ಹಾಗೂ ಸ್ಕ್ರ್ಯಾಪ್ ವಸ್ತುಗಳ ಅಪ್‌ಸೈಕ್ಲಿಂಗ್ ಕುರಿತು ಕಾರ್ಯಾಗಾರಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.


ಈ ಅಭಿಯಾನದಲ್ಲಿ NMPAಯ ಅಧಿಕಾರಿಗಳು ಉದ್ಯೋಗಿಗಳು ಹಾಗೂ ಸಿಬ್ಬಂದಿ, CISF ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಇತರ ಪಾಲುದಾರರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಈ ಎಲ್ಲಾ ಉಪಕ್ರಮಗಳು ಸ್ವಚ್ಛ ಪರಿಸರ ಸುಸ್ಥಿರ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಜಾಗೃತಿಯನ್ನು ಉತ್ತೇಜಿಸುವ NMPAಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ, ನಡೆಯುತ್ತಿರುವ ಸ್ವಚ್ಛತಾ ಪಖ್ವಾಡಾ ಮೂಲಕ, ಸ್ವಚ್ಛತೆ ಕೇವಲ ಒಂದು ಅಭಿಯಾನವಲ್ಲ ಅದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಹಾಗೂ ಜೀವನಶೈಲಿಯ ಒಂದು ಭಾಗ ಎಂಬ ಸಂದೇಶವನ್ನು NMPA ಮತ್ತೊಮ್ಮೆ ಬಲವಾಗಿ ಸಾರುತ್ತಿದೆ.

