సినిಮಾ

ಬಿಡುಗಡೆಯಾದ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದ್ದ “ಹನುಮಾನ್ ಅಂಶ್” ಚಿತ್ರ:- 50 ದಿನ ಪೂರೈಸಿ ದಾಖಲೆ ಬರೆದ “ಹನುಮಾನ್ ಅಂಶ್”.

ಸೆಪ್ಟೆಂಬರ್ 26ಕ್ಕೆ ಥಿಯೇಟರ್‌ಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿರುವ “ಹನುಮಾನ್ ಅಂಶ್” ಚಿತ್ರವು 51ನೇ ದಿನದಲ್ಲೂ ಭರ್ಜರಿ ಗಳಿಕೆ ದಾಖಲಿಸಿದೆ, ಸ್ಯಾಕ್ನಿಲ್ಕ್ ವರದಿಯ ಪ್ರಕಾರ ಚಿತ್ರವು 51ನೇ ದಿನದಂದು 6.26 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಇದರೊಂದಿಗೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಒಟ್ಟು ಗಳಿಕೆ ಬರೋಬ್ಬರಿ 297.79 ಕೋಟಿಗೆ ಏರಿಕೆಯಾಗಿದೆ, ಈ ಭಾನುವಾರದ ವೇಳೆಗೆ ಚಿತ್ರವು ಸುಲಭವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರುವುದು ಖಚಿತವಾಗಿದೆ.

ವಿಶಾಲ್ ಚತುರ್ವೇದಿ ನಿರ್ದೇಶನದಲ್ಲಿ ಮೂಡಿಬಂದಿರುವ “ಹನುಮಾನ್ ಅಂಶ್” ಚಿತ್ರವು ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಕಥೆಯಾಗಿದೆ, ತಾಯಿಯ ಅಗಲಿಕೆಯ ನಂತರ ಲಕ್ಷ್ಮೀನಾರಾಯಣ ಎಂಬ ಯುವಕ ಆಧ್ಯಾತ್ಮಿಕ ಹಾದಿ ಹಿಡಿದು, ಮುಂದೆ ನೀಮ್ ಕರೋಲಿ ಬಾಬಾ ಆಗಿ ಬೆಳೆಯುವ ರೋಚಕ ಪಯಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಶೋಭಿನವ್ ಸತ್ಯಾ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಜೀವಿಸಿದ್ದು, ವಿಹಾನ್ ಶೇಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಹಾಗೂ ಭಗವಾನ್‌ದಾಸ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *