

ನವ ಮಂಗಳೂರು ಬಂದರು ಪ್ರಾಧಿಕಾರ (NMPA) ವತಿಯಿಂದ ಹಡಗು ಸಾಗಣೆ ಸಂಸ್ಥೆಗಳು ಬಂದರು ಬಳಕೆದಾರರು ಹಾಗೂ ಇತರ ಹಿತಾಸಕ್ತಿದಾರರೊಂದಿಗೆ ಸಂವಾದ ನಡೆಸಿ ಬಂದರು ಕಾರ್ಯಾಚರಣೆ ಮತ್ತು ವ್ಯಾಪಾರ ಸೌಲಭ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವ ಉದ್ದೇಶದಿಂದ ಇಂದು ಬೆಂಗಳೂರಿನಲ್ಲಿ ಲೈನರ್ಸ್ ಸಭೆ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು IRSME, ಅಧ್ಯಕ್ಷರು DPA, IPA ಮತ್ತು NMPA ಸುಶೀಲ್ ಕುಮಾರ್ ಸಿಂಗ್ ವಹಿಸಿದ್ದರು, NMPA ಉಪಾಧ್ಯಕ್ಷರು ಎಸ್. ಶಾಂತಿ, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಬಂದರು ನಿರ್ದೇಶಕರು ದಿನೇಶ್ ಕುಮಾರ್, ಹಾಗೂ IRTS, ದಕ್ಷಿಣ ರೈಲ್ವೆ ಮುಖ್ಯ ಸರಕು ಸಾಗಣೆ ಸಾರಿಗೆ ವ್ಯವಸ್ಥಾಪಕರು ತೇಜ್ ಪ್ರತಾಪ್ ಸಿಂಗ್ ಉಪಸ್ಥಿತರಿದ್ದರು.


ವಿವಿಧ ಹಡಗು ಸಾಗಣೆ ಸಂಸ್ಥೆಗಳು ಬಂದರು ಬಳಕೆದಾರರು ಹಾಗೂ ಹಿತಾಸಕ್ತಿದಾರರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು, ಬಂದರು ಹಡಗು ಸಾಗಣೆ ಉದ್ಯಮ ರೈಲ್ವೆ ಹಾಗೂ ಇತರ ಹಿತಾಸಕ್ತಿದಾರರ ನಡುವೆ ರಚನಾತ್ಮಕ ಸಂವಾದ ಮತ್ತು ಉತ್ತಮ ಸಮನ್ವಯಕ್ಕೆ ಸಭೆ ವೇದಿಕೆಯನ್ನು ಒದಗಿಸಿತು.

ಹಿತಾಸಕ್ತಿದಾರರೊಂದಿಗೆ ನಿರಂತರ ಸಂವಾದ ಸಂಪರ್ಕ ವ್ಯವಸ್ಥೆಯ ಸುಧಾರಣೆ ಹಾಗೂ ಪರಿಣಾಮಕಾರಿ ವ್ಯಾಪಾರ ಸೌಲಭ್ಯಕ್ಕೆ NMPA ನೀಡುತ್ತಿರುವ ಆದ್ಯತೆಯನ್ನು ಸಭೆ ಮತ್ತಷ್ಟು ಬಲಪಡಿಸಿತು.

