ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಸುರಕ್ಷಿತ ಮತ್ತು ಗುಣಮಟ್ಟದ ಕುಡಿಯುವ ನೀರು ದೊರೆಯಬೇಕು ಎಂಬುದು ನಮ್ಮ ಬದ್ಧತೆ ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲಿನ ವಿಶೇಷ ತಪಾಸಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿಸಲಾಗಿದೆ.

ಅಕ್ಟೋಬರ್ 29 ಮತ್ತು 30ರಂದು ನಡೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಒಟ್ಟು 102 ಘಟಕಗಳನ್ನು ಪರಿಶೀಲಿಸಿ 69 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಗಂಭೀರ ಲೋಪಗಳು ಕಂಡುಬಂದ 8 ಘಟಕಗಳಿಗೆ ಬೀಗ ಹಾಕಲಾಗಿದೆ, 53 ಘಟಕಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ದೇವನಹಳ್ಳಿಯ ಘಟಕದಲ್ಲಿ ಲೇಬಲಿಂಗ್ ದೋಷ ಹೊಂದಿದ್ದ 1 ಲೀಟರ್ ಸಾಮರ್ಥ್ಯದ 82 ಕೇಸ್ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.


(ಮುಚ್ಚಲಾದ ಪ್ಯಾಕೇಜ್ಡ್ ಕುಡಿಯುವ ನೀರು ಘಟಕಗಳು)
1 ಎಸ್ಎಂಆರ್ ಆಕ್ವಾ ಮಿನರಲ್ಸ್, ಮುಳಬಾಗಿಲು, ಕೋಲಾರ.
2 ಎಸ್.ಪಿ. ಫುಡ್ ಆ್ಯಂಡ್ ಬೆವರೇಜಸ್, ಹಾಸನ.
3 ಅವಂತಿ ಇಂಡಸ್ಟ್ರೀಸ್, ಮದನಾಯಕನಹಳ್ಳಿ, ಬೆಂಗಳೂರು ನಗರ ಜಿಲ್ಲೆ.
4 ಓಂ ಶಕ್ತಿ ಮಿನರಲ್ಸ್, ಮದನಾಯಕನಹಳ್ಳಿ, ಬೆಂಗಳೂರು ನಗರ ಜಿಲ್ಲೆ.
5 ಆಕ್ವಾ ರಿಫ್ರೆಶ್, ಕೆಐಎಡಿಬಿ, ಕಲಬುರಗಿ.
6 ನಂದಿ ಫುಡ್ ಆ್ಯಂಡ್ ಬೆವರೇಜಸ್, ಕೆಐಎಡಿಬಿ, ಕಲಬುರಗಿ
7 ಸಾಯಿ ರಾಮ್ ಫುಡ್ ಬೆವರೇಜಸ್, ಬೀದರ್
8 ದಲಿಯಾ ಬೆವರೇಜಸ್, ಮೈಸೂರು ಗ್ರಾಮಾಂತರ
9 ಶ್ರೀ ದೇವಿ ಎಂಟರ್ಪ್ರೈಸಸ್, ಬನ್ನಿಮಂಟಪ, ಮೈಸೂರು.
10 ಶ್ರೀ ದುರ್ಗಾ ಎಂಟರ್ಪ್ರೈಸಸ್, ಮೇಟಗಳ್ಳಿ, ಮೈಸೂರು.
11 ಚಿರಂತನ್ ಫುಡ್ ಆ್ಯಂಡ್ ಬೆವರೇಜಸ್, ದಾವಣಗೆರೆ.
12 ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ.


ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲು ಯಾರಿಗೂ ಅವಕಾಶವಿಲ್ಲ ಕುಡಿಯುವ ನೀರಿನ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಈ ಪರಿಶೀಲನಾ ಕಾರ್ಯಾಚರಣೆ ಎರಡು ದಿನಗಳಿಗೆ ಸೀಮಿತವಾಗದೆ ರಾಜ್ಯಾದ್ಯಂತ ನಿರಂತರವಾಗಿ ಮುಂದುವರಿಯಲಿದೆ.

ಸಾರ್ವಜನಿಕರೂ ಪ್ಯಾಕೇಜ್ಡ್ ಕುಡಿಯುವ ನೀರು ಖರೀದಿಸುವಾಗ FSSAI ಪರವಾನಗಿ ಸಂಖ್ಯೆ, ISI ಗುರುತು, ತಯಾರಿಕಾ ದಿನಾಂಕ ಮತ್ತು ಬಾಟಲಿಯ ಸೀಲ್ ಸಮರ್ಪಕವಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ ಯಾವುದೇ ಅನುಮಾನ ಕಂಡುಬಂದಲ್ಲಿ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿ.

