ದಕ್ಷಿಣಕನ್ನಡ

ಮಂಗಳೂರು:- ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಗುಡುಗು; ಕಲಬೆರಕೆ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ.

ಜನರು ಸೇವಿಸುತ್ತಿರುವ ಬಹುತೇಕ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯಾಗುತ್ತಿದ್ದು ಇದರ ಹಿಂದೆ ದೊಡ್ಡ ಮಾಫಿಯಾ ಇರುವ ಸಾಧ್ಯತೆ ಇದೆ. ಕಲಬೆರಕೆ ಆಹಾರ ಸೇವನೆಯಿಂದ ಮಾರಕ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಇದು ಕ್ರಿಮಿನಲ್‌ಗಳಿಗಿಂತಲೂ ದೊಡ್ಡ ಅಪರಾಧ ಆಹಾರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಎಚ್ಚರಿಸಿದರು.
ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ದ್ವಿತೀಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿತ್ಯ ಅಡುಗೆಗೆ ಬಳಸುವ ಎಣ್ಣೆಗೆ ಪೆಟ್ರೋಲಿಯಂ ಉತ್ಪನ್ನ ಪ್ಯಾರಾಫಿನ್ ಬೆರೆಸಲಾಗುತ್ತಿದೆ ದೊಡ್ಡ ಪ್ರಮಾಣದಲ್ಲಿ ಪ್ಯಾರಾಫಿನ್ ರವಾನೆಯಾಗುತ್ತಿದೆ ಹಾಲಿನ ಪುಡಿಗೆ ಗೆಣಸಿನ ಹುಡಿ, ಯೂರಿಯಾ ಬೆರೆಸುತ್ತಿದ್ದಾರೆ, ಕಡಿಮೆ ಬೆಲೆಗೆ ಕಲಬೆರಕೆ ಆಹಾರ ಮಾರಾಟವಾಗುತ್ತಿದೆ ಈ ದಂಧೆ ಕೊನೆಯಾಗುವವರೆಗೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಇಲಾಖೆ ಎಷ್ಟು ದಾಳಿ ನಡೆಸಿ ಕ್ರಮ ಕೈಗೊಂಡಿದೆ ಎಂಬ ವಿವರ ನೀಡಬೇಕು ಎಂದು ತಾಕೀತು ಮಾಡಿದರು.
ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ 17 ಹಾಸ್ಟೆಲ್‌ಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿ ಸರ್ಕಾರಿ ಜಾಗ ಸಿಗದಿದ್ದರೆ ಖಾಸಗಿ ಜಾಗ ಖರೀದಿಸಿ ಅಥವಾ ಪಾಲಿಕೆಯಿಂದ ಟಿಡಿಆರ್ ನೀಡುವ ಬಗ್ಗೆ ಕ್ರಮ ವಹಿಸಿ ಎಂದು ಸೂಚಿಸಿದರು.

ನಗರ ಮತ್ತು ಗ್ರಾಮಾಂತರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ ಪ್ರತಿ ತಿಂಗಳು 1000 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿದ್ದರೂ ಸ್ಥಳೀಯಾಡಳಿತ ಏನು ಮಾಡುತ್ತಿದೆ….? ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ರೇಬಿಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದಾಗ ಜಾಗೃತಿ ಬದಲು ಮಕ್ಕಳಿಗೆ ನಾಯಿ ಕಡಿತದಿಂದ ತಪ್ಪಿಸಿಕೊಳ್ಳಲು ಹೈಜಂಪ್, ಲಾಂಗ್‌ಜಂಪ್, ರನ್ನಿಂಗ್ ತರಬೇತಿ ನೀಡಿ ಎಂದು ಶಾಸಕರು ವ್ಯಂಗ್ಯವಾಡಿದರು.

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಖರೀದಿಸಲು ಸರ್ಕಾರ ಪ್ರತಿ ಮೊಟ್ಟೆಗೆ 6 ರೂ. ನೀಡುತ್ತಿದ್ದು ಬಾಕಿ ಹಣವನ್ನು ಸ್ಥಳೀಯ ದಾನಿಗಳು ಗ್ರಾ.ಪಂ. ಮತ್ತು ಕಾರ್ಯಕರ್ತೆಯರು ಭರಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು.
565 ಸಂಶಯಿತ ಡೆಂಗ್ಯೂ ಪೈಕಿ 19 ದೃಢ 95 ಮಲೇರಿಯಾ ಪೈಕಿ 70 ಹೊರ ರಾಜ್ಯದ ಕಾರ್ಮಿಕರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿತು.

ಜೋಕಟ್ಟೆ ಅಡ್ಯಾರ್ ಕಟ್ಟೆಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಶಾಲೆಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ನಿಷೇಧ ಕಟ್ಟುನಿಟ್ಟು ಜಾರಿ ಬೆಳೆ ಸಮೀಕ್ಷೆ ಶೇ.75ರಷ್ಟು ಪೂರ್ಣ ಎಂದು ಅಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *