ದಕ್ಷಿಣಕನ್ನಡ

ಶಿವಳ್ಳಿ ಸ್ಪಂದನ(ರಿ.) ಮಂಗಳೂರು ಇದರ ಅಧ್ಯಕ್ಷರಾಗಿ “ಶ್ರೀ ಕೆ ಕೃಷ್ಣ ಭಟ್” ಅವಿರೋಧವಾಗಿ ಆಯ್ಕೆ.

ಶಿವಳ್ಳಿ ಸ್ಪಂದನ(ರಿ.) ಮಂಗಳೂರು ಇದರ ಮಹಾಸಭೆ ನಡೆದು 2026-2028 ರ ಅವಧಿಗೆ ಹೊಸ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಜರುಗಿತು, ಅಧ್ಯಕ್ಷರಾಗಿ ಶ್ರೀ ಕೆ ಕೃಷ್ಣ ಭಟ್ ಇವರು ಅವಿರೋಧವಾಗಿ ಆಯ್ಕೆಯಾದರು,ಉಪಾಧ್ಯಕ್ಷರಾಗಿ ನೋಡು ಶ್ರೀನಿವಾಸ ಆಚಾರ್ಯ ಅಳಪೆ ಭಾಸ್ಕರ ಭಟ್,ಕಾರ್ಯದರ್ಶಿಯಾಗಿ ಶ್ರೀಮತಿ ಬಿ ರಮಾಮಣಿ,ಜೊತೆ ಕಾರ್ಯದರ್ಶಿಯಾಗಿ ಶ್ರೀ ದಿನೇಶ್ ಭಟ್ ಹಾಗೂ ಶ್ರೀ ಭರತ್ ಬಿ ರಾವ್, ಖಜಾಂಜಿಯಾಗಿ ಶ್ರೀ ರಘುರಾಮರಾವ್, ಸದಸ್ಯರುಗಳಾಗಿ ಶ್ರೀ ಸಂಪತ್ ಕುಮಾರ್, ಡಾ. ಶ್ರೀ ಅಶೋಕ್ ಕುಮಾರ್ ಎಂ.ಆರ್,ಹಾಗೂ ಶ್ರೀ ಪ್ರಶಾಂತ್ ರಾವ್ ಅವಿರೋಧವಾಗಿ ಆಯ್ಕೆಯಾದರು,ಶ್ರೀ ವಾಸುದೇವ ಭಟ್ ಇವರು ನಿಕಟಪೂರ್ವ ಅಧ್ಯಕ್ಷರಾಗಿ ಆಡಳಿತ ಮಂಡಳಿಯಲ್ಲಿ ಮುಂದುವರೆಯುತ್ತಾರೆ,
ವಕೀಲ ಶ್ರೀ ರವಿಪ್ರಸನ್ನ ಸಿ ಕೆ ಇವರು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *