ದಕ್ಷಿಣಕನ್ನಡ

ಸಯ್ಯಿದುನಾ ತಾಜುಲ್ ಉಲಮಾ ಉಳ್ಳಾಲ ತಂಗಳ್ (ಖ.ಸಿ.) ಅವರ 13ನೇ ಉರೂಸ್ ಸಮಾರಂಭವು ಸೆಪ್ಟೆಂಬರ್ 11, 12 ಮತ್ತು 13ರಂದು ಕೇರಳದ ಎಟ್ಟಿಕ್ಕುಳಂನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಸುಮಾರು 65 ವರ್ಷಗಳ ಕಾಲ ಉಳ್ಳಾಲವನ್ನು ಕೇಂದ್ರೀಕರಿಸಿ ಕರ್ನಾಟಕ-ಕೇರಳ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶಪ್ರಾಯ ನಾಯಕರಾಗಿ, ಸಹಸ್ರಾರು ಉಲಮಾಗಳನ್ನು ಸಮೂಹಕ್ಕೆ ಅರ್ಪಿಸಿದ ಸಯ್ಯಿದುನಾ ತಾಜುಲ್ ಉಲಮಾ ಉಳ್ಳಾಲ ತಂಗಳ್ (ಖ.ಸಿ.) ಅವರ 13ನೇ ಉರೂಸ್ ಸಮಾರಂಭವು ಸೆಪ್ಟೆಂಬರ್ 11, 12 ಮತ್ತು 13ರಂದು ಕೇರಳದ ಎಟ್ಟಿಕ್ಕುಳಂನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಉರೂಸ್ ಸ್ವಾಗತ ಸಮಿತಿಯ ಕರ್ನಾಟಕ ವಿಭಾಗದ ಚಯರ್‌ಮೆನ್ ತೌಸೀಫ್ ಸ‌ಅದಿ ಹರೇಕಳ ತಿಳಿಸಿದ್ದಾರೆ. ಸೆಪ್ಟೆಂಬರ್ 11ರ ಶುಕ್ರವಾರ ಸಂಜೆ ತಾಜುಲ್ ಉಲಮಾರವರ ಸುಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಗಳ್ ಅವರ ನೇತೃತ್ವದಲ್ಲಿ ಮಖಾಂ ಶರೀಫ್ ಝಿಯಾರತ್ ಹಾಗೂ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ಅವರು ಮಾಹಿತಿ‌‌ ನೀಡಿದರು.

ಕೇಂದ್ರ ಮದನೀಸ್ ಅಸೋಸಿಯೇಶನ್‌ನ ಪ್ರಧಾನ‌ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ಮಾತನಾಡಿ, ಉರೂಸ್ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಕೇರಳ ಹಾಗೂ ಕರ್ನಾಟಕದ ಸುನ್ನಿ ಉಲಮಾ ನಾಯಕರು ಭಾಗವಹಿಸಲಿದ್ದಾರೆ ಎಂದರು. ಸೆಪ್ಟೆಂಬರ್ 13ರಂದು ಸನದುದಾನ ಸಮಾವೇಶ ನಡೆಯಲಿದ್ದು, ಉರೂಸ್‌ನಲ್ಲಿ ಕಾರ್ಯಕ್ರಮದಲ್ಲಿ ಕೇರಳ ಕರ್ನಾಕದ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ. ತಾಜುಲ್ ಉಲಮಾ ಎಜುಕೇಶನ್ ಸೆಂಟರ್‌ನಲ್ಲಿ ಮುಕ್ತಸರ್ ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ “ಅಲ್ ಮದನಿ” ಬಿರುದು ಪ್ರಧಾನ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಖಾಲಿದ್ ಹಾಜಿ, ಸಲೀಂ‌ ಕನ್ಯಾಡಿ, ಎಂ.ಎಂ.‌ಅಬೂಬಕರ್ ಮುಸ್ಲಿಯಾರ್ ಮೊಂಟೆಪದವು, ಅಬ್ಬಾಸ್ ಮದನಿ‌ ಬಂಡಾಡಿ, ನವಾಝ್ ಸಖಾಫಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *