ದೇವತಾರಾಧನೆ

ಶಕ್ತಿನಗರ ಶ್ರೀಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲಕ್ಷ ತುಳಸಿ ಅರ್ಚನೆ ನಡೆಯಿತು.

ಮಂಗಳೂರುರಿನ ಶಕ್ತಿನಗರದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 04 ಮತ್ತು 05 ರಂದು ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು. ಪ್ರಾತಃಕಾಲ ಶ್ರೀ ದೇವರಿಗೆ ಪಂಚಾಮೃತಾಭಿಷೇಕ,ಶ್ರೀಗಣಪತಿ ಹವನ ನಂತರ ಮಹಾಪೂಜೆ ಜರುಗಿತು. ನಂತರ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ಹಾಗೂ ಮಹಾಪೂಜೆ ನಡೆಯಿತು.ಅಂದು ಸಂಜೆ ಶ್ರೀ ಸುಧಾಕ ರ್‍ಕೋಟೆಕುಂಜತ್ತಾಯ ಕಾಸರಗೋಡು ಇವರ ತಂಡದಿಂದ ಭಕ್ತ ಸುಧಾಮ ಎಂಬ ಹರಿಕಥಾ ಸತ್ಸಂಗ ನಡೆಯಿತು.ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ವಿಶೇಷ ಆಲಂಕಾರಪೂಜೆ ನೆರವೇರಿತು. ಶ್ರೀಕೃಷ್ಣಜನ್ಮಾಷ್ಟಮಿಯ ಸಮಯದಲ್ಲಿ ಶ್ರೀ ಗೋಪಾಲ ಕೃಷ್ಣ ದೇವರಿಗೆ ಅಘ್ರ್ಯ ಪ್ರಧಾನ ನೆರವೇರಿತು. ಈ ಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಅಘ್ರ್ಯಪ್ರಧಾನ ಸೇವೆಯಲ್ಲಿ ಬಾಗವಹಿಸಿದರು.

ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತಾಭಿಷೇಕ, ಗಣಪತಿ ಹವನ ನಡೆದು ನಿರಂತರ ಲಕ್ಷ ತುಳಸಿ ಅರ್ಚನೆಯು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಅಸ್ರ ಅವರ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು. ಶ್ರೀ ದೇವರ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ಜರುಗಿತು. ಊರ ಪರವೂರ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು.
ದೇವಾಲಯದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನಾೈಕ್, ಮೊಕ್ತೇಸರರಾದ ಶ್ರೀಮತಿ ಸಗುಣಾ.ಸಿ. ನಾೈಕ್, ಸಂಜೀತ್ ನಾೈಕ್, ಅಂಜು ಆಳ್ವ ನಾೈಕ್, ಗೌರವ ಸಲಹೆಗಾರರಾದ ಅನಂತಕೃಷ್ಣ ಭಟ್‍ರವರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *