ದಕ್ಷಿಣಕನ್ನಡ

ಕದ್ರಿ ಮಲ್ಲಿಕಟ್ಟೆಯ ಕೇಂದ್ರ ಗ್ರಂಥಾಲಯ ಉದ್ಯಾನವನದಲ್ಲಿ ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಸೆಪ್ಟೆಂಬರ್ ತಿಂಗಳ ಮಾಸಿಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ.

ಕದ್ರಿ ಮಲ್ಲಿಕಟ್ಟೆಯ ಕೇಂದ್ರ ಗ್ರಂಥಾಲಯ ಉದ್ಯಾನವನದಲ್ಲಿ ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಸೆಪ್ಟೆಂಬರ್ ತಿಂಗಳ ಮಾಸಿಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಕದ್ರಿ ಮಲ್ಲಿಕಟ್ಟೆಯ ಕೇಂದ್ರ ಗ್ರಂಥಾಲಯ ಉದ್ಯಾನವನದಲ್ಲಿ ಎಂ.ಆರ್.ಪಿ.ಎಲ್–ಒಎನ್‍ಜಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಮಂದಾರ್ ಕಾಲೆ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಅವರು ಚಾಲನೆ ನೀಡಿದರು.

ಬ್ಲೀಚಿಂಗ್ ಪೌಡರ್ ಬಳಸಿ ಸ್ವಚ್ಛಗೊಳಿಸಲಾಯಿತು ನೀರಿನ ಟ್ಯಾಂಕ್‍ನ ಸಹಾಯದಿಂದ ಗೋಡೆಯ ಕಾರಂಜಿಯನ್ನೂ ಶುಚಿಗೊಳಿಸಲಾಯಿತು, ಬಿ.ಆರ್. ಹಿಲ್ಸ್ ಗ್ರಾಮ ಪಂಚಾಯಿತಿ ಸಿಬ್ಬಂದಿಯ ವಿಶೇಷ ಭಾಗವಹಿಸುವಿಕೆ ಈ ತಿಂಗಳ ಕಾರ್ಯಕ್ರಮದ ವಿಶೇಷ ಅಂಶವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ನೇತೃತ್ವದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಶ್ರಮದಾನದಲ್ಲಿ ಭಾಗವಹಿಸಿದರು, ಅವರು ಸ್ವಚ್ಛತಾ ಕಾರ್ಯಗಳಲ್ಲಿ ನೇರವಾಗಿ ಪಾಲ್ಗೊಂಡು ಹಿರಿಯ ಸ್ವಯಂಸೇವಕರೊಂದಿಗೆ ಸಂವಾದ ನಡೆಸಿ ಸಮುದಾಯ ಆಧಾರಿತ ಸ್ವಚ್ಛತೆ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳ ನಿರ್ವಹಣೆಯ ಉತ್ತಮ ಪದ್ಧತಿಗಳನ್ನು ತಿಳಿದುಕೊಂಡರು ಈ ಅನುಭವಗಳನ್ನು ಬಿ.ಆರ್. ಹಿಲ್ಸ್‍ನಲ್ಲಿ ಅಳವಡಿಸಿಕೊಳ್ಳುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಡಾ. ಜ್ಞಾನೇಶ್ವರ ಪೈ ಮಾರೂರ್, ಭಾರತೀಯ ಸೇನೆಯ ನಿವೃತ್ತ ಯೋಧರಾದ ಶ್ರೀ ಗೋಪಿನಾಥ ರಾವ್, ಶ್ರೀ ಸತ್ಯನಾರಾಯಣ ಕೆ.ವಿ. ಹಾಗೂ ದಿಲ್ ರಾಜ್ ಆಳ್ವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *