ದಕ್ಷಿಣಕನ್ನಡ

ಮಂಗಳೂರು:- ಸಾಹಿತ್ಯದಲ್ಲಿ ಅಮೋಘ ಶಕ್ತಿ ಅಡಗಿದೆ: ಡಾ. ಶಿವಪ್ರಕಾಶ್.

ಅಮೃತ ಪ್ರಕಾಶ ಪತ್ರಿಕೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು, ಮಂಗಳೂರು ಜಂಟಿ ಆಶ್ರಯದಲ್ಲಿ 120ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾರದಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು

ಮುಖ್ಯ ಸಂಪನ್ಮೂಲ ಮೀನುಗಾರಿಕಾ ಮಹಾ ವಿದ್ಯಾಲಯದ ನಿವೃತ್ತ ಡೀನ್ ಡಾ. ಎಂ .ಎಸ್ ಶಿವಪ್ರಕಾಶ್ ಅತಿಥಿಯಾಗಿ ಮಾತನಾಡಿ, ಸಾಹಿತ್ಯಕ್ಕೆ ಅದ್ಭುತ ಶಕ್ತಿ ಇದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಸದಾ ಸಂತೋಷದಲ್ಲಿ ಇರುತ್ತಾರೆ ಎಂದರು.

ಹಿರಿಯ ಪತ್ರಕರ್ತ ವಿಜಯ್ ಕೋಟ್ಯಾನ್ ಅವರು ಮಾತನಾಡಿ ವಿದ್ಯಾರ್ಥಿಗಳು, ಯುವಸಮುದಾಯ ದೇಶದ ಭವಿಷ್ಯ ಮಾತ್ರವಲ್ಲ, ಸಮಾಜದ ಸಂಸ್ಕೃತಿ, ಸಂಸ್ಕಾರ ಮತ್ತು ಜ್ಞಾನದ ವಾರೀಸುದಾರರು. ಸಾಹಿತ್ಯವೆಂದರೆ ಕೇವಲ ಪುಸ್ತಕ ಓದುವುದಲ್ಲ, ಅದು ಬದುಕು ಎಂಬ ವಾಸ್ತವ ಅರಿತುಕೊಳ್ಳೋಣ ಕಥೆ, ಕವನ, ಕಾದಂಬರಿ, ನಾಟಕ, ಜೀವನಚರಿತ್ರೆ, ಜನಪದ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಹುಟ್ಟುಹಾಕುತ್ತದೆ ಎಂದರು.
ವಿದ್ಯಾರ್ಥಿಗಳು ಜೆನ್‌ಝೀ, ಅಲ್ಟ್ರಾ ಜೆನ್‌ಝೀ ಎಂಬ ಗುಂಗಿನಿಂದ ಹೊರ ಬಂದು ಭವಿಷ್ಯ ರೂಪಿಸಿಕೊಳ್ಳಿ. ನಮ್ಮ ಹಿರಿಯರಲ್ಲಿ ಪೀಳಿಗೆಯ ಅಂತರವಿತ್ತೇ ಹೊರತು ಸಂಬಂಧಗಳ ಮೌಲ್ಯಗಳ ಬಗ್ಗೆ ಅರಿವಿತ್ತು ಆದರೆ ಆಧುನಿಕ ಯುಗದಲ್ಲಿ ಜೆನ್‌ಝೀ ಮನಸ್ಥಿತಿ ಎಲ್ಲ ಮೌಲ್ಯಗಳನ್ನು ನಾಶಮಾಡಲು ಹೊರಟಿರುವುದು ಆತಂಕಕ್ಕಾರಿ ನಡೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಜಾಗರೂಕ ನಡೆ ಇರಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮೀಡಿಯಾ ಮನಸ್ಸು ತಂಡದ ರೂವಾರಿ ಶಶಿ ಬೆಳಾಯರು ಅವರಿಗೆ ಅಮೃತ ಪ್ರಕಾಶ ಸಮಾಜ ಸೇವಾ ರತ್ನ 2026 ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಉಪ ಪ್ರಾಂಶುಪಾಲರಾದ ಅರುಣ ಕುಮಾರಿ ಉಪಸ್ಥಿತರಿದ್ದರು, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಯಶೋಧಕುಮಾರಿ ವಂದಿಸಿದರು. ಡಾ. ಅರುಣರಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *