
ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸಬೇಕು ಹಾಗೂ ಗೋವನ್ನು “ರಾಷ್ಟ್ರಮಾತೆ” ಎಂದು ಘೋಷಿಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಅಭಿಯಾನದ ಕಾರ್ಯಾಲಯವನ್ನು ಉದ್ಘಾಟನೆ ಗೋಪೂಜೆ ಮಾಡವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಹಾಗೂ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.


ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 10 ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು ಸಂಗ್ರಹಿಸಿದ ಸಹಿ ಪತ್ರ ಗಳನ್ನು ಡಿಸೆಂಬರ್ 17 ರಂದು ಬೆಂಗಳೂರಿನಲ್ಲಿ ಮಾನ್ಯ ರಾಜ್ಯಪಾಲರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.


ಪತ್ರಿಕಾಘೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್, ಈ ಅಭಿಯಾನದ ಜಿಲ್ಲಾ ಪ್ರಭಾರಿಗಳಾಗಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶಿವಾನಂದ ಮಂಡನ್, ಸಹ ಪ್ರಭಾರಿಗಳಾಗಿ ಅಶೋಕ್ ಇಳಂತಿಲ ಮತ್ತು ಶ್ರೀಮತಿ ಶಾಂಭವಿ, ಹಾಗೂ ಗೋಸೇವಾ ಗತಿವಿಧಿಯ ರಮೇಶ್ ಭಟ್, ಶ್ರೀ ಶ್ರೀ ದುರ್ಗಾನಂದ ಸ್ವಾಮೀಜಿ, ಎಚ್ ಕೆ ಪುರುಷೋತ್ತಮ್, ಗಜೇಂದ್ರ, ರಮೇಶ್ ಭಟ್, ಗೋಪಾಲ್ ಕುತ್ತಾರ್ ಮತ್ತು ಭರತ್ ಮಂಜನಾಡಿ ಉಪಸ್ಥಿತರಿದ್ದರು.

