ತೃಷಾ ಕಾಲೇಜ್ ಆಫ್ ಕಾಮರ್ಸ್ & amp ಮ್ಯಾನೇಜ್ಮೆಂಟ್ ಮತ್ತು ತೃಷಾ ಸಂಧ್ಯಾ ಕಾಲೇಜು ಮಂಗಳೂರು, ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.


ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಧ್ಯಾ ರಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ತಂಡದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು ಹಾಗೂ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.


ಮುಖ್ಯ ಅತಿಥಿಗಳಾಗಿ ಕೆಎಂಸಿ ಅತ್ತಾವರ ರಕ್ತ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರೈಸ್ಲಿನ್, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಅಧ್ಯಕ್ಷ ಲಯನ್ ಡಾ. ವಿದ್ಯಾಧಾರಿ ಶೆಟ್ಟಿ, ರೀಜನ್ 12, ರೀಜನ್ ಚೇರ್ಪರ್ಸನ್ ಲಯನ್ ಆಶಾ ನಾಗರಾಜ್, ಹಾಗೂ 285 ರಕ್ತದಾನ ಶಿಬಿರಗಳ ಸಂಘಟಕರಾದ ಲಯನ್ ಎನ್.ಜೆ. ನಾಗೇಶ್ MJF ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ತೃಷಾ ಕಾಲೇಜಿನ IQAC ಘಟಕದ ಕಾರ್ಯದರ್ಶಿ ಸಹನಾ ಶೆಟ್ಟಿ ಹಾಗೂ ಯೂತ್ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಶಿಲ್ಪಾ ಶೆಟ್ಟಿ, YRC ಕಾರ್ಯದರ್ಶಿ ಚೈತನ್ಯ ಅವರು ಉಪಸ್ಥಿತರಿದ್ದರು.

