ದಕ್ಷಿಣಕನ್ನಡ

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಟದ ಪ್ರಥಮ ಸಭೆ ಹಾಗೂ ನೂತನ ಪದಾಧಿಕಾರಿಗಳಾಗಿ ಪದಗ್ರಹಣ.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಟದ ಪ್ರಥಮ ಸಭೆ ಹಾಗೂ ನೂತನ ಪದಾಧಿಕಾರಿಗಳಾಗಿ ಪದಗ್ರಹಣ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಅವರಮಾರ್ಗದರ್ಶನದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳಾಗಿ ಜಿಲ್ಲಾ ಸಂಚಾಲಕ ವಸಂತ ಮಂಜನಾಡಿ, ಸಹ ಸಂಚಾಲಕ ನಾರಾಯಣ ಗೌಡ ಬಂಟ್ವಾಳ, ಮೂಡಬಿದ್ರೆ ಸುರೇಶ್ ಭಂಡಾರಿ, ಮಂಗಳೂರು ಉತ್ತರ ವಿನೀತ್ ನಾಯರ್, ಮಂಗಳೂರು ಸೌತ್ ಸತ್ಯನಾರಾಯಣ ಭಟ್,ಬೆಳ್ತಂಗಡಿ ಸುರೇಶ್ ಎಂ ಎಸ್, ಸುಳ್ಯ ಮನಮೋಹನ್, ಪುತ್ತೂರು ರಾಜೇಂದ್ರ ಮಾಸ್ಟರ್, ಮಂಗಳೂರು ಸೌತ್ ಸಂಚಾಲಕರು ಏಕೆ ಬಾಬು, ಮಂಗಳೂರು ಮಂಡಲ ಸಂಚಾಲಕರು ವಸಂತ್ ರೈ ಬಿಕೆ, ಈ ಸಭೆಯಲ್ಲಿ ರಾಜ್ಯ ಬಿಜೆಪಿ ಶಿಕ್ಷಣ ಸಹ ಸಂಚಾಲಕರು ಮತ್ತು ಬಿಜೆಪಿ ಸೇವಾಸಂಕಲ್ಪದ ಬದಲಾವಣೆಯ ರಾಜ್ಯ ಸಹ ಉಸ್ತುವಾರಿ ಎಂ ಜಿ ಭಟ್ ಕುಮಟಾ ಭಾಗವಹಿಸಿ ಬದಲಾವಣೆಯ ಕಾರ್ಯಕ್ರಮದ ಚಟುವಟಿಕೆಯಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಸೂಚನೆಯನ್ನು ನೀಡಿದರು, ಅದೇ ರೀತಿ ಪ್ರಕೋಷ್ಟದ ಜಿಲ್ಲಾ ಮತ್ತು ಮಂಡಲ ಮಟ್ಟದ ಸಮಿತಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರುಗಳಾದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸದಸ್ಯರು ಮತ್ತು ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಅವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ವಸಂತಕುಮಾರ್ ಮಂಜನಾಡಿ ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *